ವಿಜಯಪುರ: ವಿಜಯಪುರ ನಗರದ ಹೊರ ವಲಯದ ಕೆಹೆಚಬಿ ಕಾಲೋನಿಯಲ್ಲಿ ತುಂಡಾಗಿ ಕತ್ತರಿಸಿದ ವ್ಯಕ್ತಿಯ ಶವ ಪತ್ತೆಯಾಗಿದೆ.
ಬರ್ಬರವಾಗಿ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇನ್ನು ಹೊಮ್ ಗಾರ್ಡ್ ಡ್ರೆಸ್ ನಲ್ಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ವಿಜಯಪುರ DSP ಬಸವರಾಜ ಎಲಿಗಾರ್, ಜಲನಗರ ಠಾಣೆಯ PSI ದೀಪಾ, ಹಾಗೂ ಸಿಬ್ಬಂಧಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಕೊಲೆಯಾದ ವ್ಯಕ್ತಿಯ ಹೆಸರು ಹಾಗೂ ಮಾಹಿತಿ ಲಭ್ಯವಾಗಿಲ್ಲ, ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.