ಕರ್ನಾಟಕ : ಚನ್ನಮ್ಮನಕೆರೆ ಅಚ್ಚುಕಟ್ಟು ಹಾಗೂ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಉಪೇಂದ್ರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಮೊದಲ FIR ಗೆ ಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಅದೇ ರೀತಿ ಎರಡನೇ FIR ಗೂ ಕೋರ್ಟ್ ತಡೆ ಕೊಟ್ಟಿದೆ. ಮತ್ತೊಂದು ಕೇಸ್ನಲ್ಲೂ ಉಪೇಂದ್ರಗೆ ರಿಲೀಫ್; ಎರಡನೇ ಎಫ್ಐಆರ್ಗೂ ತಡೆ ನೀಡಿದ ಹೈಕೋರ್ಟ್ಉಪೇಂದ್ರರನ್ನು ಚಿತ್ರರಂಗದಿಂದ 5 ವರ್ಷ ಬ್ಯಾನ್ ಮಾಡಲು ಮನವಿ ಮಾಡಿದ ಸಾಮಾಜಿಕ ಕಾರ್ಯಕರ್ತ, ನಟ ಉಪೇಂದ್ರ (Upendra) ನೀಡಿದ ಆಕ್ಷೇಪಾರ್ಹ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ದಲಿತ ಸಂಘಟನೆಯವರು ಈ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಉಪೇಂದ್ರ ಅವರ ಬಂಧನಕ್ಕೂ ಆಗ್ರಹಿಸಲಾಗಿತ್ತು. ಚನ್ನಮ್ಮನಕೆರೆ ಅಚ್ಚುಕಟ್ಟು ಹಾಗೂ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಉಪೇಂದ್ರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಮೊದಲ ಎಫ್ಐಆರ್ಗೆ ಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಅದೇ ರೀತಿ ಎರಡನೇ ಎಫ್ಐಆರ್ಗೂ ಕೋರ್ಟ್ ತಡೆ ಕೊಟ್ಟಿದೆ.
ಏನಿದು ಪ್ರಕರಣ ಎಂದರೆ..??
ಕಳೆದ ವಾರ ಪ್ರಜಾಕೀಯದ ಬಗ್ಗೆ ಮಾತನಾಡಲು ಉಪೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದರು. ಈ ವೇಳೆ ಉಪೇಂದ್ರ ಆಕ್ಷೇಪಾರ್ಹ ಪದಬಳಕೆ ಮಾಡಿದ್ದರು. ಹೀಗಾಗಿ ಅವರ ವಿರುದ್ಧ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಕೇಸ್ ದಾಖಲಾಯಿತು. ಅದೇ ರೀತಿ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಕುಮಾರ್ ಕೂಡ ದೂರು ದಾಖಲು ಮಾಡಿದ್ದರು. ಈ ದೂರನ್ನು ಆಧರಿಸಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಹೆಚ್ಚಿದ ಬಿಸಿ ಮೊದಲ ಪ್ರಕರಣದಲ್ಲಿ ಹೈಕೋರ್ಟ್ ತಡೆ ಕೊಟ್ಟ ಬೆನ್ನಲ್ಲೇ ಹರೀಶ್ ಕುಮಾರ್ ಅವರು ಆ್ಯಕ್ಟೀವ್ ಆದರು. ‘ಮೊದಲ ಪ್ರಕರಣದಲ್ಲಿ ಮಾತ್ರ ತಡೆ ಕೊಡಲಾಗಿದೆ. ಎರಡನೇ ಪ್ರಕರಣ ಹಾಗೆಯೇ ಉಳಿದುಕೊಂಡಿದೆ. ಹೀಗಾಗಿ, ಪೊಲೀಸರು ಉಪೇಂದ್ರ ಅವರನ್ನು ಬಂಧಿಸಬೇಕು’ ಎಂದು ಹರೀಶ್ ಕುಮಾರ್ ಪ್ರತಿಭಟನೆ ಮಾಡಿದರು. ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನವೂ ನಡೆಯಿತು..