ತಮಿಳುನಾಡು : ಮದುವೆಯಾಗಿದ್ದರೂ ಕೂಡಾ ಮಹಿಳೆ ಮತ್ತೊಬ್ಬನ ಜೊತೆ ಸಂಬಂಧವಿಟ್ಟುಕೊಂಡಿದ್ದಳು. ಇದು ಗೊತ್ತಾಗುತ್ತಿದ್ದಂತೆ ಗಂಡ ಜಗಳ ತೆಗೆದಿದ್ದಾರೆ. ಎಷ್ಟು ಬುದ್ಧಿ ಹೇಳಿದರೂ ಪತ್ನಿ ಕೇಳಿಲ್ಲ. ಜಗಳ ತಾರಕಕ್ಕೇರಿ ಪತ್ನಿ ತವರು ಮನೆ ಸೇರಿಕೊಂಡಿದ್ದಳು. ಇದರಿಂದ ರೊಚ್ಚಿಗೆದ್ದ ಗಂಡ, ಪತ್ನಿಯ ಲವರ್ ತಲೆ ಕಡಿದಿದ್ದಾನೆ.
ಆ ತಲೆಯನ್ನು ತವರು ಮನೆ ಸೇರಿದ್ದ ಪತ್ನಿಯ ಮುಂದೆ ತಂದು ಬಿಸಾಡಿದ್ದಾನೆ. ಇದನ್ನು ನೋಡಿದ ಪತ್ನಿ ತಲೆ ಸುತ್ತು ಬಂದು ಬಿದ್ದಿದ್ದಾಳೆ.
ಈ ಘಟನೆ ನಡೆದಿರೋದು ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಕನ್ನಡಿಕುಲಂ ಗ್ರಾಮದಲ್ಲಿ. ವೇಲುಸ್ವಾಮಿ ಎಂಬಾತನೇ ಆರೋಪಿಯಾಗಿದ್ದು, ಡಿ.ಮುರುಗನ್ ಕೊಲೆಯಾಗಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಪತಿ ಇದ್ದರೂ ಕೂಡಾ ಮುರುಗನ್ ಜೊತೆ ಪತ್ನಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಪತಿ ವೇಲುಸ್ವಾಮಿ ಬುದ್ಧಿ ಹೇಳಿದರೂ ಕೇಳಿರಲಿಲ್ಲ. ಕೊನೆಗೆ ಗಲಾಟೆಯಾಗಿ ಪತ್ನಿ ತವರು ಸೇರಿಕೊಂಡಿದ್ದಳು.
ಇದರಿಂದ ಮತ್ತಷ್ಟು ಆಕ್ರೋಶಗೊಂಡ ವೇಲುಸ್ವಾಮಿ, ಮುರುಗನ್ ಜೊತೆ ಜಗಳವಾಡಿದ್ದಾರೆ. ಇದೇ ವೇಳೆ ರೊಚ್ಚಿಗೆದ್ದು ಮುರುಗನ್ ತಲೆ ಕತ್ತರಿಸಿದ್ದಾನೆ. ಅದನ್ನು ಪತ್ನಿಯ ತವರು ಮನೆಗೆ ತಂದಿದ್ದಾನೆ. ಪತ್ನಿಯ ಮುಂದೆ ಆ ತಲೆ ಬಿಸಾಕಿ ತಗೋ ನಿನ್ನ ಲವರ್ ತಲೆ ಎಂದು ಹೇಳಿದ್ದಾನೆ. ಇದರಿಂದ ಗಾಬರಿಯಾಗಿ ಹೆಂಡತಿ ತಲೆ ತಿರುಗಿ ಬಿದ್ದಿದ್ದಾಳೆ. ಪತ್ನಿಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ವೇಲುಸ್ವಾಮಿಯನ್ನು ಅರೆಸ್ಟ್ ಮಾಡಿದ್ದಾರೆ.