ಇಂದು ಗಾಣಿಗ ಸಮಾಜದ ಮುಖಂಡರಿಂದ ಪತ್ರಿಕಾ ಗೋಷ್ಠಿ ನಡೆಸಿದೆ
ತಮ್ಮ ಸಮುದ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಶ್ರೀ ಶ್ರೀ ಕಲ್ಲಿನಾಥ ಸ್ವಾಮೀಜಿ ಮಾತನಾಡಿ ನಮ್ಮ ಗಾಣಿಗ ಸಮುದಾಯವು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸುಮಾರು 50-60 ಲಕ್ಷ ಜನರಿದ್ದು, ಸಮುದಾಯವು ಆರ್ಥಿಕ, ಸಮಾಜಕ ಮತ್ತು ರಾಜಕೀಯವಾಗಿ ಹಿಂದುಳಿದ ಸಮಾಜವಾಗಿದ್ದು, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸರ್ಕಾರದಿಂದ ಬರುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದುದರಿಂದ ನಮ್ಮ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮಾಡಿಸಿ ಅದರಿಂದ ಸಿಗುವ ಅನುದಾನದಿಂದ ಸಮುದಾಯದ ಕೆಳವರ್ಗದ ಜನರಿಗೆ ತಲುಪಿಸಲು ನಮ್ಮ ಸಂಘಟನೆಯಿಂದ ಹಲವುಬಾರಿ ಹೋರಾಟ ಮತ್ತು ನಮ್ಮ ಇತರೆ ಸಂಘ ಸಂಸ್ಥೆಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಹ ಸರ್ಕಾರಗಳು ಯಾವುದೇ ರೀತಿಯಲ್ಲಿ ಗಮನಹರಿಸಲಿಲ್ಲ.
ನಂತರ ಅದನ್ನು ಅರಿತು ನಮ್ಮ ಸಂಘಟನೆಯು ದಿನಾಂಕ 18-12-2024 ರಂದು ಸುವರ್ಣ ವಿಧಾನ ಸೌಧ ಬೆಳಗಾವಿ ಗಾಣಿಗ ಅಭಿವೃದ್ಧಿ ನಿಗಮ ಮಂಡಳಿಯ ಬೇಡಿಕೆಗಾಗಿ ಸಮುದಾಯ ಎಲ್ಲಾ ಜಿಲ್ಲೆಗಳ ಸಂಘ ಸಂಸ್ಥೆಗಳ ಮುಖಂಡರುಗಳು ಸೇರಿ ಹೋರಾಟ ಮಾಡಿದ ಸಲವಾಗಿ ದಿನಾಂಕ 22-02-2023 ರಂದು ಅಂದಿನ ಬಿಜೆಪಿ ಸರ್ಕಾರ ಗಾಣಿಗ ನಿಗಮ ಮಂಡಳಿಯನ್ನು ಸ್ಥಾಪನೆ ಮಾಡಿ ಘೋಷಣೆ ಮಾಡಿತ್ತು.
ಆದರೆ ಹಿಗಿನ ಕಾಂಗ್ರೆಸ್ ಸರ್ಕಾರ ನಿಗಮ ಮಂಡಳಿಯ ವಿಷಯವಾಗಿ ಮತ್ತು ಸಮುದಾಯದ ಬೇಡಿಕೆಗಳಿಗೆ ಯಾವುದೇ ರೀತಿಯ ಗಮನ ಹರಿಸುತ್ತಿಲ್ಲ.
ಮತ್ತು ಮಲತಾಯಿ ದೋರಣೆ ಮಾಡುತ್ತಿದೆ. ಆದುದ್ದರಿಂದ ಇದೇ ತಿಂಗಳು ದಿನಾಂಕ 16-02-2024 ರಂದು ರಾಜ್ಯ ಸರ್ಕಾರದ ಹಣಕಾಸಿನ ಬಜೆಟ್ ಇರುವ ಕಾರಣ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾ ವತಿಯಿಂದ ದಿನಾಂಕ 18-12- 2024ನೇ ಬುಧವಾರ ಬೆಳಗ್ಗೆ 10-30 ಗಂಟೆಗೆ ಸುವರ್ಣ ವಿಧಾನ ಸೌಧ ಬೆಳಗಾವಿ ಗಾಣಿಗ ಅಭಿವೃದ್ಧಿ ನಿಗಮ ಮಂಡಳಿಯ ಅನು ಷ್ಠಾನ, ನೊಂದಣಿ, ಅಧಿಕೃತ ಕಛೇರಿ ಹಾಗೂ ಹೆಚ್ಚಿನ ಅನುದಾನ ಪಡೆಯುವ ಸದುದ್ದೇಶದಿಂದ ಒಂದು ದಿನದ ಶಾಂತಿಯುತ ಹೋರಾಟವನ್ನು
ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ನಮ್ಮ ಗಾಣಿಗ ಸಮುದಾಯದ ಮಠಾಧಿಪತಿಗಳು, ಗುರುಗಳು, ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳ ಸದಸ್ಯರುಗಳು, ಮಹಿಳಾ ಸಂಘಟನೆಗಳು ಹಾಗೂ ಸಮುದಾಯದ ಮುಖಂಡರುಗಳು ಹಾಗೂ ಸಮಸ್ತ ಗಾಣಿಗ ಬಂಧುಗಳು ಸ್ವಾಭಿಮಾನ ಗಾಣಿಗರ ಹೋರಾಟಕ್ಕೆ ತಾವೆಲ್ಲರೂ ಭಾಗವಹಿಸಿ ವಿನಂತಿಸಿಕೊಳ್ಳುತ್ತೇವೆ. ಈ ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿ ಎಂದು ಕಳಕಳಿಯಿಂದ ಕೋರಿಕೊಂಡರು
ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾ ರಾಜ್ಯ ಸಮಿತಿ ಹಾಗೂ ಗಾಣಿಗೆ ಸಮುದಾಯ ಸಂಘ ಸಂಸ್ಥೆಗಳು ಮತ್ತು ಸಮುದಾಯದ ಮುಖಂಡರುಗಳು
ರಾಜ್ಯಾಧ್ಯಕ್ಷರು ಆನಂದ ಕೆ. ಮಂಡ್ಯ
ನಂದು ಹ. ಗಡಗಿ ರಾಜ್ಯ ಯುವಘಟಕ ಅಧ್ಯಕ್ಷರು ಹಾಗೂ ಸಮುದಾಯದ ಎಲ್ಲ ಮುಖಂಡರು ಉಪಸ್ಥಿತರಿದ್ದರು