ಬೆಂಗಳೂರು ಗ್ರಾಮಾಂತರ : ಮಳೆಗಾಗಿ ಜನ ನಾನಾ ಆಚರಣೆಗಳ ಮೊರೆ ಹೋಗುವುದು ತಿಳಿದೇ ಇದೆ. ದೇವರಿಗೆ ಪ್ರಾರ್ಥನೆ, ವಿಶೇಷ ಪೂಜೆ, ಹೋಮದಿಂದ ಹಿಡಿದು, ಗೊಂಬೆಗಳ ಮದುವೆ, ಕಪ್ಪೆಗಳ ಮದುವೆಗಳು ಅಲ್ಲಲ್ಲಿ ನಡೆಯುತ್ತಿವೆ. ಜೊತೆಗೆ ಕತ್ತೆಗಳ ಮದುವೆಯೂ. ಇವೆಲ್ಲಾ ಸಾಂಕೇತಿಕವಾಗಿ ನಡೆಯುತ್ತವಷ್ಟೇ.
ಆದರೆ ದೊಡ್ಡಬಳ್ಳಾಪುರ ತಾಲೂಕಿನ ಪಚ್ಚಾರಲಹಳ್ಳಿಯಲ್ಲಿ ಗ್ರಾಮದಲ್ಲಿ ಇಬ್ಬರು ಗಂಡು ಮಕ್ಕಳಿಗೆ ವಿವಾಹವಾಗಿ ಬಹಳ ಅದ್ಧೂರಿಯಾಗಿ ನಡೆಯಿತು. ಗ್ರಾಮಸ್ಥರೆಲ್ಲಾ ಸೇರಿ, ಹಿರಿಯರು ಮುಂದೆ ನಿಂತು ಶಾಸ್ತ್ರಬದ್ಧವಾಗಿ ವಿವಾಹವನ್ನು ನೆರವೇರಿಸಿದ್ದು ವಿಶೇಷವಾಗಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪಚ್ಚಾರಲಹಳ್ಳಿಯಲ್ಲಿ, ಮಳೆಗಾಗಿ ಇಬ್ಬರು ಗಂಡು ಮಕ್ಕಳಿಗೆ ಅಣಕು ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.
ಹುಡುಗನಿಗೆ ಹುಡುಗಿ ವೇಶ ಹಾಕಿ ಸೀರೆ ಉಡಿಸಿ ವಧುವಿನಂತೆ ಅಲಂಕಾರಣ ಶಾಸ್ತ್ರೋಕ್ತವಾಗಿ ಗ್ರಾಮಸ್ಥರ ಮುಂದೆ ಮದುವೆ ಮಾಡಿ ಮಳೆಗಾಗಿ ಆರಾಧನೆ ಮಾಡಿದ್ದಾರೆ. ಹೀಗೆ ಮದುವೆ ಮಾಡಿದರೆ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಗ್ರಾಮಾಸ್ಥರೆಲ್ಲಾ ಸೇರಿ ಮದುವೆ ಮಾಡಿ ಮಳೆರಾಯನಿಗೆ ಪ್ರಾರ್ಥನೆ ಮಾಡಿದ್ದಾರೆ.
ಈ ವರ್ಷ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ. ಕೃಷಿಯನ್ನೇ ಅವಲಂಬಿಸಿರುವ ರೈತರು ಕಂಗೆಟ್ಟಿದ್ದಾರೆ. ಬರಗಾಲಕ್ಕೆ ಬೇಸೆತ್ತ ರೈತರು ಮಳೆಯಿಲ್ಲದೆ ಬೆಳೆ ನಾಶಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತನ್ನ ಮಳೆಗಾಗಿ ಹಳ್ಳಿಗಳಲ್ಲಿ ವಿಭಿನ್ನ ರೀತಿ ಆಚರಣೆ ಮಾಡಿದ್ದಾರೆ.