ಬೆಂಗಳೂರು:- ಬಸ್ ಗಳಲ್ಲಿ ಬೆಲೆಬಾಳುವ ವಸ್ತು ಕೊಂಡೊಸ್ಕೊ ಪ್ರಯಾಣಿಕರೇ ಎಚ್ಚರ. ನಿದ್ದೆಗೆ ಜಾರಿದ್ರೆ ನಿಮ್ಮ ವಸ್ತು ಕ್ಷಣದಲ್ಲೇ ಮಾಯವಾಗಿಬಿಡತ್ತೆ ಹುಷಾರ್.
ಹೌದು, ಬಸ್ ಪ್ರಯಾಣಿಕರನ್ನೆ ಟಾರ್ಗೆಟ್ ಮಾಡಿ ಖದೀಮರು ತಮ್ಮ ಕೈಚಳಕ ತೋರುತ್ತಾರೆ.
ಅದರಂತೆ ಇದೀಗ ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಿ ದುಬಾರಿ ಬೆಲೆಯ ಮೊಬೈಲ್, ಲ್ಯಾಪ್ಟಾಪ್ ಕಳ್ಳತನ ಮಾಡ್ತಿದ್ದ ಇಬ್ಬರು ಖದೀಮರನ್ನು ಅರೆಸ್ಟ್ ಮಾಡಲಾಗಿದೆ. ಕೊಡಿಗೇಹಳ್ಳಿ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಆಂಧ್ರದ ಮದನಪಲ್ಲಿಯ ಶಬರೀಶ್(32), ಬೆಂಗಳೂರು ಜಯನಗರ ವಾಸಿ ಫಜಲ್ ಪಾಷಾ(29) ಬಂಧಿತ ಕಳ್ಳರು. ಆಂಧ್ರ ದಿಂದ ಬೆಂಗಳೂರು, ಬೆಂಗಳೂರು ನಿಂದ ಆಂಧ್ರಕ್ಕೆ ಹೊರಡೊ ಬನ್ಗಳಲ್ಲಿ ಕಳ್ಳತನ ಮಾಡುತ್ತಿದ್ದರು.

ಕಳ್ಳರು ರಿಸರ್ವ್ ಬನ್ಗಳ ಬಳಿ ವಾಚ್ ಮಾಡುತ್ತಾ ನಿಲ್ಲಿದ್ದರು. ದುಬಾರಿ ಬೆಲೆಯ ಮೊಬೈಲ್, ಲ್ಯಾಪ್ ಟಾಪ್ ಪ್ರಯಾಣಿಕರು ಕಂಡ್ರೆ ಇವರು ಬಸ್ ಹತ್ತುತ್ತಿದ್ರು. ಬಸ್ ಹತ್ತಿ ಮೊಬೈಲ್, ಲ್ಯಾಪ್ಟಾಪ್ ಕಳ್ಳತನ ಮಾಡಿ ಮಾರ್ಗಮಧ್ಯೆ ಇಳಿದು ಎಸ್ಕೆಪ್ ಆಗುತ್ತಿದ್ದರು. ಲ್ಯಾಪ್ಟಾಪ್ ತೆಗೆದುಕೊಂಡು ಖಾಲಿ ಲ್ಯಾಪ್ಟಾಪ್ ಬ್ಯಾಗ್ ಇಟ್ಟು ಖದೀಮರು ಇಳಿಯುತ್ತಿದ್ದರು.
ಇದೀಗ ಇಬ್ಬರು ಆಂಧ್ರ ಮೂಲದ ಕಳ್ಳರನ್ನ ಕೊಡಿಗೇಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಬರೋಬ್ಬರಿ 39ಲ್ಯಾಪ್ಟಾಪ್ಸ್ ವಶಕ್ಕೆ ಪಡೆಯಲಾಗಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

