ಹುಬ್ಬಳ್ಳಿ ;ಕಲಬುರ್ಗಿಯಿಂದ ಹುಬ್ಬಳ್ಳಿಗೆ ಬಸ್ನಲ್ಲಿ ಪ್ರಯಾಣಿಸಿದ್ದ ಕಲಬುರ್ಗಿಯ ಅನ್ನಪೂರ್ಣಾ ಭಜಂತ್ರಿ ಅವರ ಬ್ಯಾಗ್ನಲ್ಲಿದ್ದ ₹3.20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
ಅನ್ನಪೂರ್ಣಾ ಅವರು ಕಲಬುರ್ಗಾದಿಂದ ಬಸ್ನಲ್ಲಿ ವಿಜಯಪುರ ಮಾರ್ಗವಾಗಿ ಹುಬ್ಬಳ್ಳಿಗೆ ಬಂದಿದ್ದರು.
ನಗರದ ಅಕ್ಷಯ ಕಾಲೊನಿಯ ಸಹೋದರಿ ಮನೆಗೆ ಬಂದು ಬ್ಯಾಗ್ ನೋಡಿದಾಗ, ಹರಿತವಾದ ವಸ್ತುವಿನಿಂದ ಕೊಯ್ದು 65 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.