ವಿಜಯಪುರ: (ಸೆಪ್ಟೆಂಬರ್ 5) ಜಿಲ್ಲೆಯ ಇಬ್ಬರು SP ಗಳನ್ನ ವರ್ಗಾವಣೆ ಮಾಡಿದ ರಾಜ್ಯ ಸರಕಾರ ಆದೇಶಿಸಿದೆ.

ಬೆಳ್ಳಿಗೆ ಅಷ್ಟೇ ವಿಜಯಪುರ ಪೊಲೀಸ ವರಿಷ್ಠಾಧಿಕಾರಿ H D ಆನಂದಕುಮಾರ್ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿತ್ತು.

ಅದೇರೀತಿ ವಿಜಯಪುರ ಜಿಲ್ಲಾ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣನವರ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. 2014 ಬ್ಯಾಚ್ನ ಅನಿತಾ ಹದ್ದಣ್ಣನವರನ್ನು ಬೆಂಗಳೂರು ಸಿಟಿಗೆ ವರ್ಗಾವಣೆ ಮಾಡಲಾಗಿದೆ. ಇನ್ನು ಜಿಲ್ಲೆಯಲ್ಲಿ ಹಲವು ಪ್ರಕರಣಗಳನ್ನು ಭೇದಿಸಿ ಆರೋಪಿಗಳಿಗೆ ಕಠಿಣ ಪಾಠ ಕಲಿಸಿದ್ದರು. ಜಿಲ್ಲೆಯಲ್ಲಿ ಒಂದೇ ದಿನ ಪೊಲೀಸ ವರಿಷ್ಠಾಧಿಕಾರಿ ಎಚ್ಡಿ ಆನಂದಕುಮಾರ ಹಾಗೂ ಲೋಕಾಯುಕ್ತ ಎಸ್ಪಿ ಅನಿತಾ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

