ಅಕ್ರಮ ಮದ್ಯ ಮಾರಾಟ ಇಬ್ಬರ ಬಂಧನ
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಭತಗುಣಕಿ ಗ್ರಾಮದಲ್ಲಿ ಕದ್ದು ಮುಚ್ಚಿ ಮನೆಯಲ್ಲಿ ಹಾಗೂ ಗ್ರಾಮದ ಕೆಲವು ಜಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದರು ಇವರಾಗಿ ಯಾರು ಕೇಳುವುದಿಲ್ಲ ನಮ್ಮ ಹಿಂದೆ ದೊಡ್ಡವರ ಹಸ್ತ ಇಂದೇ ಎಂದು ಕುಲಂ ಕುಲ್ಲಾ ಮದ್ಯ ಮಾರಾಟ ಮಾಡುವ ವೇಳೆ ಸಿಕ್ಕಿ ಬಿದ್ದಿರುವ ಘಟನೆ ಗುರುವಾರ ನಡೆದಿದೆ. ಭತಗುಣಕಿ ಗ್ರಾಮದ ವಿಠಲ ಮಹಾದೇವ ಗಜಾಕೋಶ ಹಾಗೂ ಶಿವಾನಂದ ಮಲ್ಲಿಕಾರ್ಜುನ ಬಿಲಕುಂದಿ ಎನ್ನುವವರೇ ಸಿಕ್ಕಿ ಬಿದ್ದ ಆರೋಪಿಗಳು. ಹೊಟೆಲ್ ನಿಂದ ಅಕ್ರಮವಾಗಿ ಮದ್ಯ ತಂದು ಮಾರುತ್ತಿದ್ದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿದೆ. ಇಬ್ಬರು ಪೊಲೀಸರ ವಶದಲ್ಲಿದ್ದಾರೆ.