ಬೆಂಗಳೂರು : ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಂಬಕ್ಕೆ ಬಿಎಂಡಬ್ಲ್ಯೂ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಯಶವಂತಪುರದ ಆರ್ ಎಂ ಸಿ ಯಾರ್ಡ್ ಬಳಿ ಮುಂಜಾನೆ 3.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು 31 ವರ್ಷದ ಮನಮೋಹನ್ ಹಾಗೂ 25 ವರ್ಷದ ನಿಖಿಲ್ ಎಂದು ಗುರುತಿಸಲಾಗಿದೆ. ಕುಡಿದ ಮತ್ತಿನಲ್ಲಿ ಮನಮೋಹನ್ ಹಾಗೂ ನಿಖಿಲ್ ಯಶವಂತಪುರದಿಂದ ಆರ್ ಎಂಸಿ ಯಾರ್ಡ್ ಕಡೆ ಹೋಗುತ್ತಿದ್ದರು. ಓವರ್ ಸ್ಪೀಡ್ ನಿಂದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಮೃತದೇಹಗಳನ್ನು ಸಾಗಿಸಲಾಗಿದೆ. ಯಶವಂತಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.