ಕಲಬುರಗಿ ಜಿಲ್ಲೆ : ಆಳಂದ ತಾಲ್ಲೂಕಿನ ಕಡಗಂಚಿ ಕೇಂದ್ರೀಯ ವಿಶ್ವವಿದ್ಯಾಲಯದ ಎದುರಿಗೆ ಮುಖ್ಯ ರಸ್ತೆ ಮೇಲೆ ಲಾರಿ-ಬೈಕ್ ನಡುವೆ ಡಿಕ್ಕಿ ಸಂಭವಿಸಿ ಶನಿವಾರ ಶಾಲಾ ವಿದ್ಯಾರ್ಥಿ ಮತ್ತು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆಳಂದ ಪಟ್ಟಣದ ರೇವಣಸಿದ್ಧೇಶ್ವರ ಕಾಲೊನಿಯ ನಿವಾಸಿ ಅಶೋಕ ಇಂಗಳೆ (48) ಹಾಗೂ ಬಾಲಕ ಸಲಾವೋದ್ದಿನ್ ಅಹ್ಮದ್ (15) ಮೃತಪಟ್ಟ ದುರ್ದೈವಿಗಳು.
ಪಟ್ಟಣದ ಎಂಎಆರ್ಜಿ ಪ್ರೌಢ ಶಾಲೆಯ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯು ಪರೀಕ್ಷೆ ಬರೆದಿದ್ದಾನೆ. ಮನೆ ಸಮೀಪದಲ್ಲೇ ಫರ್ನಿಚರ್ ಅಂಗಡಿಯ ಕುಶಲಕರ್ಮಿಯಾಗಿದ್ದ ಅಶೋಕ ಅವರು ವಿದ್ಯಾರ್ಥಿಯನ್ನು ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾರೆ. ಎದುರಿಗೆ ಬಂದ ಲಾರಿಯು ಡಿಕ್ಕಿ ಹೊಡೆದ ಪರಿಣಾಮವಾಗಿ ಸವಾರ ಅಶೋಕ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ.