ವಿಜಯಪುರ: ಆನ್ಲೈನ್ನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ಲಕ್ಷಾಂತರ ನಗದು ವಂಚಿಸಿದ ನೈಜಿರಿಯನ್ ಮೂಲದ ವ್ಯಕ್ತಿ ಸೇರಿದಂತೆ ನಾಲ್ವರು ಆನ್ಲೈನ್ ಕದೀಮರನ್ನು ಬಂಧಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ಆರೋಪಿಗಳಿಂದ ಮೊಬೈಲ್ ಹಾಗೂ ಸಿಮ್ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ. ಧಾರವಾಡದ ಶಮಸುದ್ದಿನ್ ಸಂಗ್ರೇಶಕೊಪ್ಪ, ಫಯಾಜ್ಅಹ್ಮದ್ ತಡಕೋಡ, ರುಬಿನ್ ಬಾಳೆ ಹಾಗೂ ಕೀನ್ಯಾ ದೇಶದ ಕ್ರಿಸ್ ಅನ್ಯುಗಾಬಾರಕೆ ಥಾಮಸ್ ಒಂಬೊಗಾ ಬಂಧಿತ ಆರೋಪಿಗಳು. ವಿಜಯಪುರದ ಬಟ್ಟೆ ವರ್ತಕ ವಿಶಾಲ ಜೈನ್ ಎಂಬುವರು ಈ ಆರೋಪಿಗಳಿರುವ ವಾಟ್ಸ್ ಆ್ಯಪ್ ಗ್ರುಪ್ನಲ್ಲಿ ಸೇರ್ಪಡೆಯಾಗಿದ್ದರು. ಕೆಲ ದಿನಗಳ ಕಾಲ ಸೂಕ್ಷ್ಮವಾಗಿ ಗಮನಿಸಿದ ಜೈನ್ ಕೊನೆಗೆ ತಾನೂ 59 ಲಕ್ಷ ಹಣವನ್ನು ಆನ್ಲೈನ್ನಲ್ಲಿ ಹೂಡಿಕೆ ಮಾಡಿದರು. ಇದೀಗ್ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ವಿಜಯಪುರ CEN Inspector ರಮೇಶ್ ಅವಜಿ, PSI ಮಲ್ಲಿಕಾರ್ಜುನ ತಳವಾರ, ಹಾಗೂ ಸಿಬ್ಬಂದಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.