ವಿಜಯಪುರ: ನಗರದಲ್ಲಿ ತಡರಾತ್ರಿ ಎರಡು ಬಾರಿ ಭೂಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.9 ಕಂಪನ ದಾಖಲಾಗಿದೆ. ಗುಮ್ಮಟ ನಗರಿ ಸೇರಿದಂತೆ ಜಿಲ್ಲೆಯ ಕೆಲವೆಡೆ ಭೂಕಂಪನವಾಗಿದ್ದು, ಜನರ ಅನುಭವಕ್ಕೆ ಬಂದಿದೆ. ಇದರಿಂದ ಜನರಲ್ಲಿ ಆತಂಕ ಮೂಡಿದೆ.
ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಭಾಗದಲ್ಲೂ ಮತ್ತೆ ಭೂಮಿ ಕಂಪಿಸಿದೆ. ರಾತ್ರಿ 12.22 ಹಾಗೂ ರಾತ್ರಿ 1.20 ಕ್ಕೆ ಭೂಮಿ ಕಂಪಿಸಿದೆ. ಭೂಮಿಯ 5ಕಿ.ಮೀ ಆಳದಲ್ಲಿ ಭೂಕಂಪನವಾಗಿದೆ ಎಂದು ತಿಳಿದು ಬಂದಿದೆ.