ವಿಜಯಪುರ : ನಗರದ ಪೊಲೀಸ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿ ಘೋಷ್ಟಿ ನಡೆಸಿ ಮಾತನಾಡಿದ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಹೆಚ ಡಿ ಆನಂದ ಕುಮಾರ.
ಭೀಮರಾಯ ತಂ। ಕರೆಪ್ಪ ದಳವಾಯಿ, ಜಾತಿ ಒಂದು ಕುರುಬರ, ವಯಾ 70 ವರ್ಷ, ಉದ್ಯೋಗ ಕೂಲಿ ಕೆಲಸ ಸಾ: ಹೆಗಡಿಹಾಳ ತಾ: ವಿಜಯಪೂರ ಈತನು ದಿನಾಂಕ: 25,08,2023 ರಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ತನ್ನ ಫಿರ್ಯಾದಿ ನೀಡಿದ್ದರಲ್ಲಿ
ತನ್ನ ಸೊಸೆ ಜಯಶ್ರೀ ಗಂಡ ಜಕರಾಯ ದಳವಾಯಿ, ವಯಾ 34 ವರ್ಷ, ಸಾ ಹೆಗಡಿಹಾಳ ಪಾಲಿ ಬಸವನ ಬಾಗೇವಾಡಿ ಇವಳು ಅಡಿಗೆ ಕೆಲಸಕ್ಕೆ ಹೋಗುತ್ತಿದ್ದ ಅಡುಗೆ ಮಾಡುವವನಾದ ಡೋಂಗಿಸಾಬ ಪನಸಾಬ ಬೊಮ್ಮನಳ್ಳಿ, ವಯಾ: 38 ವರ್ಷ, ಜಾತಿ ಮುಸ್ಲಿಂ ಸಾ: ಬಸವನ ಬಾಗೇವಾಡಿ ಇವನೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ಇವರ ಸಂಬಂಧವನ್ನು ಆಕೆಯ ಗಂಡನಾದ ಜಕರಾಯ ಭೀಮರಾಯ ದಳವಾಯಿ ಈತನಿಗೆ ಗೊತ್ತಾಗಿದ್ದು, ಈತನು ತನ್ನ ಹೆಂಡತಿಗೆ ಡೋಂಗ್ರಿಸಾಬನ ಜೊತೆಗಿನ ಸಂಬಂಧ ಬಿಡು ಅಂತಾ ಜಗಳ ಮಾಡಿದ್ದಕ್ಕೆ ಇಬ್ಬರು ಆರೋಪಿತರು ಒಳಸಂಚು ಮಾಡಿ ಕೊಲೆ ಮಾಡಿರುತ್ತಾರೆ ಅ೦ತಾ ಫಿರ್ಯಾದವನ್ನು ನೀಡಿದ್ದು, ಈ ಬಗ್ಗೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 286/2023, ಕಲಂ: 120(ಬಿ), 302, 201 ಸಹ ಕಲಂ: 34 ಐಪಿಸಿ ನೇದ್ದರಡಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ಇದರಲ್ಲಿಯ ಮೃತನಿಗೆ ಕೊಲೆ ಮಾಡಿ ಸುಮಾರು 6 ತಿಂಗಳು ಗತಿಸಿದ್ದರೂ ಇದನ್ನು ಪತ್ತೆ ಮಾಡುವದು ತುಂಬಾ ಸವಾಲಿನದು ಆಗಿದ್ದು, ಈ ಪ್ರಕರಣವನ್ನು ಶ್ರೀ ಅ ಹೆಚ್.ಡಿ. ನಂದಕುಮಾರ್ ಐಪಿಎಸ್, ಪೊಲೀಸ್ ಅಧೀಕ್ಷಕರು, ವಿಜಯಪುರ, ಶ್ರೀ ಶಂಕರ ಮಾರಿಹಾಳ, ಕೆಎಸ್ಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿಜಯಪುರ ರವರ ಮಾರ್ಗದರ್ಶನದಲ್ಲಿ ಶ್ರೀ ಜಿ.ಎಚ್, ತಳಕಟ್ಟಿ, ಡಿ.ಎಸ್.ಪಿ, ವಿಜಯಪುರ ಗ್ರಾಮಾಂತರ ಉಪವಿಭಾಗ, ಶ್ರೀ ಆರ್.ಎಸ್, ಜಾನರ್, ಪಿ.ಐ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ, ರವರ ನೇತೃತ್ವದಲ್ಲಿ ಶ್ರೀ ಏನೊದ ಪೂಜಾರಿ, ಪಿ.ಎಸ್.ಐ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ, ಶ್ರೀಮತಿ ಆರ್.ಎ. ಬನ್ನಿ, ಮ,ಪಿ.ಎಸ್.ಐ, ಹಾಗೂ ಸಿಬ್ಬಂಧಿ ಜನರನ್ನೊಳಗೊಂಡ ಒಂದು ತನಿಖಾ ತಂಡವನ್ನು ರಚಿಸಿದ್ದು, ಸದರಿ ತನಿಖಾ ತಂಡವು ವೈಜ್ಞಾನಿಕ ರೀತಿಯಲ್ಲಿ ಆರೋಪಿತರಿಗೆ ಪತ್ತೆ ಮಾಡಿದ್ದು, ಆರೋಪಿತರಾದ
1) ಡೋಂಗ್ರಿಸಾಬ ತಂದೆ ಸೈಪನಸಾಬ ಬೊಮ್ಮನಳ್ಳಿ ವಯಾ 38 ವರ್ಷ ಸಾ: ಗಣೇಶನಗರ ಬ.ಬಾಗೇವಾಡಿ 2) ಜಯಶ್ರೀ ಗಂಡ ಜಕರಾಯ ದಳವಾಯಿ ವಯಾ 34 ವರ್ಷ ಸಾ: ಹೆಗಡಿಹಾಳ ಹಾಲಿ ವಸ್ತಿ ಗಣೇಶನಗರ ಬಸವನ ಬಾಗೇವಾಡಿ: ಇವರನ್ನು ದಿನಾಂಕ: 25,08,2023 ರಂದು ಮದ್ಯಾಹ್ನ 12.30 ಗಂಟೆಯ ಸುಮಾರಿಗೆ ದಸ್ತಗೀರ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಇದರಲ್ಲಿಯ ಆರೋಪಿ ಆನಂ: 1 ನೇದವನು ಸಭೆ ಸಭಾರಂಭ ಹಾಗೂ ಮದುವೆ ಕಾರ್ಯಕ್ರಮಗಳಲ್ಲಿ ಅಡುಗೆ ಮಾಡುವ ಕೆಲಸ ಮಾಡುತ್ತಿದ್ದು, ಸದರಿ ಆರೋಪಿತನು ಇದರಲ್ಲಿಯ ಆರೋಪಿ ನಂ-2 ಜಯಶ್ರೀ ಇವಳಿಗೆ ಅಡುಗೆ ಮಾಡುವ ಕೂಲಿ ಕೆಲಸಕ್ಕೆ ಹೇಳುತ್ತಿದ್ದು, ಇದರಿಂದ ಅವರಿಬ್ಬರ ನಡುವೆ ಸಲುಗೆ ಬೆಳೆದು ಅವರ ಮದ್ಯದಲ್ಲಿ ಸಂಬಂಧ ಬೆಳೆದಿದ್ದು ಇರುತ್ತದೆ.
ಆರೋಪಿತರಿಬ್ಬರ ಸಂಬಂಧವನ್ನು ಆಕೆಯ ಗಂಡ ಜಕರಾಯ ತಂದೆ ಭೀಮರಾಯ ದಳವಾಯಿ ಸಾ ಹೆಗಡಿಹಾಳ ಈತನಿಗೆ ಗೊತ್ತಾಗಿದ್ದು, ಅವನು ತನ್ನ ಹೆಂಡತಿಗೆ ಡೋಂಗಿಸಾಬನ ಜೊತೆಗಿನ ಸಂಬಂಧ ಬಿಡು ಅಂತಾ ಜಗಳ ಮಾಡಿದ್ದಕ್ಕೆ ಇಬ್ಬರು ಆರೋಪಿತರು ಕೂಡಿ ಬಸವನ ಬಾಗೇವಾಡಿ ಶಹರದ ಗಣೇಶನಗರದಲ್ಲಿ ಇರುವ ಆರೋಪಿತಳ ಮನೆಯಲ್ಲಿ ಕುಳಿತು ಮೃತ ಜಕರಾಯಯ ದಳವಾಯಿ ಈತನಿಗೆ ಕೊಲೆ ಮಾಡುವ ಬಗ್ಗೆ ಒಳಸಂಚು ಮಾಡಿದ್ದು, ಜಕರಾಯನು ಆರೋಪಿತಳ ಮನೆಗೆ ಹೋದಾಗ ಅವಳು ಜಕರಾಯ ಬಂದ ವಿಷಯವನ್ನು ಡೋಂಗಿಸಾಬನಿಗೆ ಫೋನ್ ಮಾಡಿ ತಿಳಿಸಿದ್ದು, ಇಬ್ಬರು ಆರೋಪಿತರು ಕೂಡಿ ಈ ಮೊದಲು ಒಳಸಂಚು ಮಾಡಿದಂತೆ ಜಕರಾಯನಿಗೆ ದಿನಾಂಕ: 23.02.2023 ರಂದು ರಾತ್ರಿ 11.50 ಗಂಟೆ ಸುಮಾರಿಗೆ ಜೈಯಲ್ಲಿ ಈತಳು ತನ್ನ ಗಂಡ ಜಕರಾಯನಿಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಡೋಂಗಿಸಾಬ ಈತನು ಕೊಡ್ತಿಯಿಂದ ಹೊಡೆದು ಕೊಲೆ ಮಾಡಿದ್ದು ಇರುತ್ತದೆ. ಕೊಲೆ ಮಾಡಿದ ನಂತರ ಶವವನ್ನು ಬೆಡ್ಸೀಟಿನಲ್ಲಿ ಸುತ್ತಿ ಚಾದರನಲ್ಲಿ ಗಂಟು ಕಟ್ಟಿ ಟಿ.ಎ.ಎಸ್. ಎಕ್ಸೆಲ್ ಮೋಟಾರ್ ಸೈಕಲ್ ನಂ: ಕೆ.ಎ:24 ಕ್ಯೂ: 7402 ನೇದರ ಮೇಲೆ ಶವವನ್ನು ಇಟ್ಟುಕೊಂಡು ಲಾವಣಿ ಯಮನಪ್ಪ ಅವಟಿ, ಇವರ ಜಮೀನದ ಬಾಜು ಖುಲ್ಲಾ ಜಾಗೆಯಲ್ಲಿ ಆರೋಪಿತನು ಈ ಮೊದಲು ದೊಡ್ಡ ಕಟ್ಟಿಗೆಗಳನ್ನು ಕೂಡಿ ಹಾಕಿದ್ದು, ಆ ಕಟ್ಟಿಗೆಯಲ್ಲಿ ಶವವನ್ನು ಒಯ್ದು ಬೆಡ್ಶೀಟ್ ಹಾಗೂ ಚಾದರ ಸಮೇತ ಇಟ್ಟು ಡಿಸೆಲ್ ಹಾಕಿ ಶವವನ್ನು ಸುಟ್ಟಿದ್ದು ಇರುತ್ತದೆ.
ದಿನಾಂಕ: 24.02.2023 ರಂದು ಆರೋಪಿತನು ಶವ ಸುಟ್ಟಿರುವ ಬಗ್ಗೆ ಹೋಗಿ ನೋಡಿದಾಗ ದೊಡ್ಡ ಕಟ್ಟಿಗೆಗಳು ಬಾಜು ಬಿದ್ದಿದ್ದು, ಅವುಗಳನ್ನು ಪುನಃ ಬೆಂಕಿಯ ಕೆಂಡದಲ್ಲಿ ಒಗೆದು ಸುಟ್ಟಿದ್ದು, ದಿನಾಂಕ: 25,02,2023 ರಂದು ಮತ್ತೇ ಶವ ಸುಟ್ಟ ಜಾಗೆಗೆ ಹೋಗಿ ಶವ ಪೂರ್ಣ ಸುಟ್ಟಿದ ಬಗ್ಗೆ ಖಾತ್ರಿಪಡಿಸಿಕೊಂಡು ಶವದ ಬೂದಿಯನ್ನು ಶವ ಸುಟ್ಟ ಜಾಗೆಯ ಸಮೀಪ ಇರುವ ಹಾಳು ಬಿದ್ದ ಭಾವಿಯಲ್ಲಿ ಒಗೆದು ಅದೇ ದಿನ ಆರೋಪಿತರ ಮನೆಗೆ ಹೋಗಿ ಮೃತನ ಎ.ಟಿ.ಎಂ. ಕಾರ್ಡ್, ಆತನ ಲೈಸನ್ಸ್, ಸಣ್ಣ ಐಡೆಂಟಿ ಕಾರ್ಡ್ ಫೊಟೊಗಳು ಪಾನಕಾರ್ಡ್ ಇವುಗಳನ್ನು ಒಂದು ಕರೆ ಪ್ಲಾಸ್ಟಿಕ ಕ್ಯಾರಿಬ್ಯಾಗಿನಲ್ಲಿ ಹಾಕಿ ಅದರಲ್ಲಿ ಇಟ್ಟಂಗಿ ಇಟ್ಟು ಗುನ್ನೆಗೆ ಬಳಸಿದ ಕೊಡ್ಲಿ ಹಾಗೂ ಮೃತನ ದಾಖಲಾತಿಗಳು ಇಟ್ಟಿರುವ ಕ್ಯಾರಿಬ್ಯಾಗ ಇವುಗಳನ್ನು ಕೂಡಾ ಅದೇ ಭಾವಿಯಲ್ಲಿ ಹಾಕಿ ಸಾಕ್ಷಿ ನಾಶಪಡಿಸಿದ್ದು ಇರುತ್ತದೆ.
ಈ ಪ್ರಕರಣದ ಪತ್ತೆ ಕುರಿತು ಕರ್ತವ್ಯ ನಿರ್ವಹಿಸಿದ ಎಲ್ಲ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಕರ್ತವ್ಯವನ್ನು ಶ್ಲಾಘಿಸಲಾಗಿದೆ.
ಎಂದು ವಿಜಯಪುರ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಹೆಚ ಡಿ ಆನಂದಕುಮಾರ್ ಹೇಳಿದರು..