ಸಿಂದಗಿ ತಾಲೂಕು ಸಿಂದಗಿ ಪಟ್ಟಣದ ಮುಸ್ಲಿಂ ಸಮುದಾಯದ ಸರ್ವೇ ನಂಬರ್ 1027, 1029, 834 ಮೂರು ಖಬರಸ್ತಾನಗಳಿದ್ದು ಅವು ಅಂಜುಮನ ಒಡೆತನದ ಆಸ್ತಿಗಳಾಗಿವೆ ವಕ್ಫಾ ಆಸ್ತಿಗಳಲ್ಲ ಜನರಲ್ಲಿ ತಪ್ಪು ಭಾವನೆ ತುಂಬಿ ವಕ್ಫಾ ಅಧಿಕಾರಿಗಳು ಹಾಗೂ ಸ್ವಯಂ ಘೋಷಿತ ಖಬರಸ್ತಾನ ಕಮಿಟಿಯು ತಾರಾತುರಿಯಲ್ಲಿ ಜಾಗವನ್ನು ಖಾಲಿ ಮಾಡಿಸಿ ಬಡ ಜನರ ಹೊಟ್ಟೆ ಮೇಲೆ ಎಳೆಯುವ ಕೆಲಸ ಮಾಡಿದ್ದಾರೆ ಎಂದು ಅಂಜುಮನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್ ಎಂ ಪಾಟೀಲ ಗಣಿಹಾರ ಆರೋಪಿಸಿದರು. ಪಟ್ಟಣದ ಅಂಜುಮನ ಶಿಕ್ಷಣ ಸಂಸ್ಥೆಯಲ್ಲಿ ವಕ್ಫ್ ಆಸ್ತಿಗಳ ಕುರಿತು ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, 1937,38ರಲ್ಲಿ ಸ್ಥಾಪನೆಯಾದ ಅಂಜುಮನ ಶಿಕ್ಷಣ ಸಂಸ್ಥೆಯ ಸ್ವಂತ ಈ ಮೂರು ಆಸ್ತಿಗಳ ನಿರ್ವಹಣೆ ಮಾಡುತ್ತಿತ್ತು ಅದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ವಕ್ಫ್ ಗೆ ಸಂರಕ್ಷಣೆ ಮಾಡಲು ಈ ಎಲ್ಲ ಆಸ್ತಿಗಳನ್ನು ನೀಡಿದ್ದು ಅವು ಬೋರ್ಡ್ ಆಸ್ತಿಗಳಲ್ಲ ಅವು ಅಂಜುಮನ್ ಆಸ್ತಿಗಳು ಸಂಘ – ಸಂಸ್ಥೆಗಳು ವಕ್ಫಾ ಆಗುವುದಿಲ್ಲ ಅಂಜುಮನ ಎಂದರೆ ನಾವೇ ಎಂದು ಮುಸ್ಲಿಂ ಜನರಲ್ಲಿ ಎರಡು ಪಂಗಡಗಳನ್ನಾಗಿ ಒಡೆದು ಜಗಳ ಹಚ್ಚುವಂತ ಕಾರ್ಯಕ್ಕೆ ಮುಂದಾಗಿದೆ. ಅಂದಿನ ಅಧ್ಯಕ್ಷರಾಗಿದ್ದ ನಬಿಸಾಭ ಹಸನಸಾಭ ಅಂಡೆವಾಲೆ ಇದ್ದಾಗ ಆ ಆಸ್ತಿಗಳನ್ನು ಯಾರು ಉಪಯೋಗಿಸಿಕೊಂಡು ಬಂದಿದ್ದರೋ ಅಂತಹ ಆಸ್ತಿ ಗಳು ವಕ್ಫಾ ಆಸ್ತಿಗಳು ಅದನ್ನು 1964ರಲ್ಲಿ ಹುಟ್ಟಿಕೊಂಡ ವಕ್ಫ್ ಬೋರ್ಡ್ ಸಂಸ್ಥೆಯು ಅಂಜುಮನ ಎಂದರೆ ನಾನೆ ಎಂದು ಬಿಂಬಿಸುತ್ತ ಜನರಿಗೆ ಮಂಕು ಭೂದಿ ಎರಚುವ ಕಾರ್ಯದಲ್ಲಿ ತೊಡಗಿದೆ ಮೊದಲು ಅಂಜುಮನ ಹುಟ್ಟಿದೆ ನಂತರ ವಕ್ಫ್ ಬೋರ್ಡ್ ಹುಟ್ಟಿದೆ ಈ ಕಾರ್ಯ ಮಗನಿಂದ ಅಪ್ಪನಿಗೆ ಬುದ್ದಿ ಹೇಳುವ ಕೆಲಸ ಇದಾಗಿದೆ ಅದಕ್ಕೆ ನಾವು ಕಾಣುನಾತ್ಮಕ ಮೊರೆ ಹೋಗಿದ್ದು ಇದೆ 15 ರಂದು ತಡೆಯಾಜ್ಞೆ ಸಿಕ್ಕಿದೆ ಸರಕಾರ, ವಕ್ಫ್ ಬೋರ್ಡ್ ಮತ್ತು ಶಾಸಕರ ಸಹಕಾರ ನೀಡಿದರೆ ಸ್ಮಶಾನ ಮಧ್ಯದಲ್ಲಿ ಬಿಟ್ಟು ಸುತ್ತಲೂ ಮಳಿಗೆಗಳನ್ನು ನಿರ್ಮಿಸಿ ಬಡಜನರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದರು. ನಾವು ಕಾನುನಾತ್ಮಕ ಹೋರಾಟ ಮಾಡಿ ತಮ್ಮದಾಗಿಸಿಕೊಂಡಿದ್ದೇವೆ ವಕ್ಫಾ ಸಂಸ್ಥೆ ಯ ಕೆಲಸ ಅಭಿವೃದ್ಧಿಪರವಾಗಿವೆ ಆದರೆ ಅದನ್ನು ಆಡಳಿತ ನಡೆಸುವವರು ಸರಿಯಾಗಿ ಬರುತ್ತಿಲ್ಲ ಎಂದು ದುರಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಚೇರಮನ ರಜಾಕ ದುದ್ದನಿ, ನಿರ್ದೇಶಕ ಮಹಿಬೂಬ ಹಸರಗುಂಡಗಿ ಉಸ್ಥಿತರಿದ್ದರು

