ಮುದ್ದೇಬಿಹಾಳ ನಲ್ಲಿ ಆಟೋ ಪಲ್ಟಿ ಮಹಿಳೆ ಸಾವು
ಕೂಲಿ ಕೆಲಸಕ್ಕೆ ಕೃಷಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪ್ಯಾಜೋ ಆಟೋ ಪಲ್ಟಿಯಾಗಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು ಸುಮಾರು 10-15 ಕಾರ್ಮಿಕರು ಗಾಯಗೊಂಡಿದ್ದಾರೆ. ನಿನ್ನೆ ಮುದ್ದೇಬಿಹಾಳ ತಾಲೂಕಿನ ಗಡಿಭಾಗ ತಂಗಡಗಿಯ ಕೃಷ್ಣಾ ನದಿ ಬಳಿಯ ಅಮರಗೋಳ ಕ್ರಾಸನಲ್ಲಿ ನಡೆದಿದೆ. ಮೃತ ಮಹಿಳೆ ಕೋಳೂರು ಗ್ರಾಮದ ಮಾಲಾ ಖಾದರಬಾಷಾ ಹವಾಲ್ದಾರ್ ಎಂದು ಗುರುತಿಸಲಾಗಿದೆ. ಆಟೋದಲ್ಲಿದ್ದವರೆಲ್ಲ ಅದೇ ಗ್ರಾಮದವರು ಎಂದು ಮೂಲಗಳು ತಿಳಿಸಿವೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.