ಗಾಂಜಾ ಆರೋಪಿ ಅರೆಸ್ಟ್
ವಿಜಯಪುರ ಜಿಲ್ಲೆಯಲ್ಲಿ ದಿನೆ ದಿನೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ ಜಿಲ್ಲೆಯ ತಿಕೋಟಾ ತಾಲೂಕಿನ ಯತ್ನಾಳ ಗ್ರಾಮದ ರಿ.ಸ.ನಂ: 114/3 ನೇದ್ದರಲ್ಲಿನ 01-ಎಕರೆ 37-ಗುಂಟೆ ಜಮೀನಿನಲ್ಲಿ ತಮ್ಮ ಸ್ವಂತ ಲಾಭಕ್ಕಾಗಿ ತಮ್ಮ ಜಮೀನಿನ ಕಬ್ಬು ಹಾಗೂ ಮೆಕ್ಕೆಜೋಳ ಬೆಳೆಗಳ ನಡುವೆ ಅಕ್ರಮವಾಗಿ ಗಾಂಜಾವನ್ನು ಬೆಳೆದಿದ್ದು, ಅವರ ಮೇಲೆ ದಾಳಿ ದಾಳಿಮಾಡಿದ ಪೊಲೀಸರು ಅಂದಾಜು 79,80,000/- ರೂ. ಮೌಲ್ಯದ ಒಟ್ಟು 228 ಕೆ.ಜಿ ಹಸಿ ಗಾಂಜಾ ಗಿಡಗಳನ್ನು ಜಪ್ತ ಮಾಡಿಕೊಂಡಿರುತ್ತಾರೆ. ಜಮೀನಿನ ಮಾಲೀಕರಾದ
1) ಮಲ್ಲು ಗೋವಿಂದ ಕರ್ವೆ, 60 ವರ್ಷ, ಸಾ: ಯತ್ನಾಳ
2) ಮನಿಗೇನಿ ಗೋವಿಂದ ಕರ್ವೆ, 63 ವರ್ಷ, ಸಾ: ಯತ್ನಾಳ
ಅಕ್ರಮವಾಗಿ ಈ ದಂದೆ ರಾಜಾರೋಷವಾಗಿ ನಡೆಸುತಿದ್ದರು
ಜಿಲ್ಲೆಯ ಪೊಲೀಸ್ ಅಧೀಕ್ಷಕರು ಲಕ್ಷ್ಮಣ ನಿಂಬರಗಿ ವಿಜಯಪುರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ, ಶಂಕರ ಮಾರಿಹಾಳ ಮತ್ತು ರಾಮನಗೌಡ ಹಟ್ಟಿ ರವರುಗಳ ಮಾರ್ಗದರ್ಶನದಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಡಿಎಸ್ಪಿ ಸುನೀಲ.ಆರ್.ಕಾಂಬಳೆ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ರಮೇಶ ಅವಜಿ ಹಾಗೂ ಸಿಬ್ಬಂದಿ ಜನರು ಖಚಿತ ಮಾಹಿತಿಯನ್ನು ಆಧರಿಸಿ, ರೆಡ್ ಮಾಡಿ ಅಪರಾಧಿಗಳನ್ನ ಬಂಧಿಸಿದ್ದಾರೆ .
ಈ ಬಗ್ಗೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಗುನ್ನೆ ನಂ: 14/2025, ಕಲಂ: 20 (a)(b)(i)(c) ಎನ್ಡಿಪಿಎಸ್ ಕಾಯ್ದೆ-1985 ರ ಅಡಿ ಪ್ರಕರಣ ದಾಖಲಿಸಿ, ಆರೋಪಿತರನ್ನು ದಸ್ತಗೀರ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಸುನೀಲ.ಆರ್. ಕಾಂಬಳೆ ಡಿಎಸ್ ಪಿ, ರಮೇಶ ಸಿ. ಅವಜಿ ಪಿಐ, ಮಲ್ಲಿಕಾರ್ಜುನ ತಳವಾರ ಪಿಎಸ್ಐ, ಬಿ.ಎಂ.ಪವಾರ ಎಎಸ್ಐ. ವೈ.ಎಸ್.ಜಮಖಂಡಿ ಎಎಸ್ಐ, ಆರ್.ಡಿ.ಅಂಜುಟಗಿ ಸಿಎಚ್ಸಿ-426. ಆರ್.ಬಿ.ಕೋಳಿ ಸಿಎಚ್ಸಿ-671, ಎಂ.ಎಂ. ಕುರುವಿನಶೆಟ್ಟಿ ಸಿಎಚ್ಸಿ-1247, ಎಸ್.ಜಿ.ದಾನಪ್ಪಗೋಳ, ಸಿಎಚ್ಸಿ-532, ಎಚ್.ಎನ್.ಬಾಗವಾನ, ಸಿಎಚ್.ಸಿ -1299, ಆರ್.ಐ.ಲೋಣಿ ಸಿಎಚ್.ಸಿ-859, ಎ.ಆರ್.ಗದ್ಯಾಳ ಸಿಪಿಸಿ-1349, ಎಸ್.ಆರ್.ಬಡಚಿ ಸಿಪಿಸಿ-961, ಡಿ.ಆರ್.ಪಾಟೀಲ್ ಸಿಪಿಸಿ-967, ವಾಣಿಶ್ರೀ ಹೂಗಾರ ಮಪಿಸಿ-1414, ಎಸ್.ಬಿ.ಮುಲ್ಲಾ ಮಪಿಸಿ-1484 ಇವರುಗಳ ಕರ್ತವ್ಯವನ್ನು ಶ್ಲಾಘಿಸಲಾಗಿದೆ.
ಲಕ್ಷ್ಮಣ ನಿಂಬರಗಿ, ಐಪಿಎಸ್
ಪೊಲೀಸ್ ಅಧೀಕ್ಷಕರು, ವಿಜಯಪುರ ಜಿಲ್ಲೆ.

